Powerful Five- Mamata Banerjee

ಏರು ಧ್ವನಿ, ದಿಟ್ಟ ನುಡಿ. ಲಾಲೂ ಕಿರಿಕ್‌ಗೂ ಅಷ್ಟೇ ಚೂಪು ಮಾತಿನಿಂದ ಉತ್ತರ ಕೊಡೋ ಚಾಕಚಕ್ಯತೆ. ಮಾತಿನ ಮಧ್ಯೆ ಮಧ್ಯೆ ಎಲ್ಲೋ ನೆನೆಪಾದ ಪುಟ್ಟ ಕವಿತೆ. ಜೊತೆ ಜೊತೆಗೆ ಠಾಗೋರರ ಸುಂದರ ಕೋಟ್ ಗಳು. ಇದು ನೇರ ನುಡಿ, ನೇರ ನಡೆಗೆ ಹೆಸರಾದ ಮಮತಾ ಬ್ಯಾನರ್ಜಿ ಸ್ಟೈಲ್.. ಖಡಕ್ಕಾಗಿ ಮಾತಾಡೋ ದೀದಿ ಈಗ ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸ ಬದಲಿಸಿದ್ದಾರೆ.


    ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ದಶಕಗಳ ಕಾಲ ಬಂಗಾಳವನ್ನ ಬಿಟ್ಟು ಬಿಡದೆ ಆಳಿದ ಹುಲಿಗಳೀಗ ಪಂಜರ ಸೇರಿಕೊಂಡಿವೆ. ಹೌದು. 30 ವರ್ಷಗಳ ಎಡರಂಗದ ಆಳ್ವಿಕೆಗೆ ಮಮತಾ ದೀದಿ ತಿಲಾಂಜಲಿ ಇಟ್ಟಿದ್ದಾರೆ. ಬಿಳಿ ಸೀರೆಯುಟ್ಟು, ಹವಾಯಿ ಚಪ್ಪಲಿ ತೊಟ್ಟು ಡಿಫರೆಂಟಾಗಿ ಮಾಡಿದ ಹೋರಾಟಗಳೆಲ್ಲಾ ಕ್ಲಿಕ್ ಆಗಿವೆ. ಪರಿಣಾಮ ಮಮತಾ ಈಗ ಪಶ್ಚಿಮ ಬಂಗಾಳದ ಸಿ.ಎಂ..!.


ನೋಡೋಕೆ ಖಡಕ್ಕಾಗಿ ಕಾಣೋ ದೀದಿ ನಿಜಕ್ಕೂ ಮಮತಾಮಯಿ. ಬಹುಮುಖ ಪ್ರತಿಭೆಯ ಬ್ಯಾನರ್ಜಿ ಒಬ್ಬ ಒಳ್ಳೆ ಭಾಷಣಗಾರ್ತಿ, ಒಬ್ಬ ಸುಂದರ ಕವಿಯತ್ರಿ, ಮತ್ತಷ್ಟೇ ಮೋಹಕ ಪೇಂಟರ್ ಕೂಡ ಹೌದು. ಇನ್ ಒನ್ ಲೈನ್ ಮಮತಾ ಲವ್ಸ್ ಪಿ ಥ್ರೀ. ಅಂದ್ರೆ ಪೋಯಟ್ರಿ, ಪೇಂಟಿಂಗ್, ಆಂಡ್ ಪಾಲಿಟಿಕ್ಸ್.


ದಶಕಗಳ ಕಾಲ ಬೀದಿ ಬದಿ ನಿಂತು ತಮ್ಮ ಕಷ್ಟ-ಸುಖಗಳಿಗಾಗಿ ಹೋರಾಡಿದ ಮಮತಕ್ಕನಿಗೆ ಬಂಗಾಳದ ಜನತೆ ಮಮತೆಯ ಉಡುಗೊರೆ ನೀಡಿದ್ದಾರೆ. ಒಂದು ಐತಿಹಾಸಿಕ ಗೆಲುವೊಂದನ್ನು ಅವರ ಮಡಿಲಿಗೆ ಹಾಕಿದ್ದಾರೆ.

ಇಂಗ್ಲೀಷ್ ಹಿಂದಿಯಲ್ಲಿ ಮಮತಾಳಿಗೆ ಹಿಡಿತವಿರದಿದ್ರು, ಬಂಗಾಳಿಯಲ್ಲಿ ತರಾಟೆ ತೆಗೆಯಲು ಶುರುವಿಟ್ಟುಕೊಂಡ್ರೇ ಮಹಾ ಕಾಳಿಯೇ ಸರಿ. ಬಿಳಿ ಸೀರೆ ಹವಾಯಿ ಚಪ್ಪಲಿಯನ್ನ ತೊಟ್ಟು ಸಿಂಪ್ಲಿಸಿಟಿಯನ್ನ ಮೆರೆಯುವ ಮಮತಾ ನಿಜ ಜೀವನದಲ್ಲೂ ತುಂಬಾ ಸಿಂಪಲ್. ಈ ಕಾರಣಕ್ಕಾಗೇ ಮಮತಾ ಇಂದು ಬಂಗಾಳದ ಜನತೆಯ ನೆಚ್ಚಿನ ದೀದಿಯಾಗಿದ್ದಾರೆ.




!-- Facebook share button Start -->