Seal Of Death-Part2


ಒಸಾಮಾ ಬಿನ್ ಲಾಡೆನ್ ಸಾಯೋದಕ್ಕೂ ಮುಂಚೆ ನಿಮ್ಗೆ ಯು.ಎಸ್ ನೆವಿ ಸೇಲ್ಸ್ ಬಗ್ಗೆ ಗೊತ್ತಿರ್ಲಿಲ್ಲ ಅಂದ್ರೆ ಅದು ದುರಾದೃಷ್ಟವೇ ಸರಿ. ಅವ್ರು ಪ್ರಪಂಚದಲ್ಲಿರುವ ಸೂಪರ್ ಹ್ಯೂಮನ್ ಗಳು. ಅಂದ್ಹಾಗೆ ಬರಾಕ್ ಒಬಾಮಾ ಅಮೇರಿಕಾದ ಅತ್ಯಂತ ಇಂಪಾರ್ಟೆಂಟ್ ಮಿಷನ್ ಗಾಗಿ ಈ ಸೀಲ್ಸ್ ಗಳನ್ನೇ ಯಾಕೆ ನೇಮಿಸಿದ ಗೊತ್ತಾ.. ಒಬ್ಬ ಸೀಲ್ಸ್ ಆಗಬೇಕು ಅಂದ್ರೆ ಏನೆಲ್ಲಾ ಕಸರತ್ತು ಮಾಡ್ಬೇಕು ಗೊತ್ತಾ.. ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ... 

ನೀವು ಕೂಡ ಯು.ಎಸ್ ಆರ್ಮಿಯ ನೆವಿ ಸೀಲ್ ಆಗ್ಬೇಕಂದ್ರೆ ಈ ಮೂರು ಪ್ರಶ್ನೆಗಳನ್ನ ನಿಮಗೆ ನೀವೆ ಕೇಳಿಕೊಳ್ಳಿ. ನಿಮಗೆ ಸಾವಿನ ಬಗ್ಗೆ ಭಯವಿದೆಯಾ...
ನಿಮಗೆ ನೀವು ಸಾವಿಗೆ ತುಂಬಾ ಹತ್ತಿರವಾಗಿರೋದು ಇಷ್ಟಾ ಆಗುತ್ತಾ.., ಇವೆರಡಕ್ಕಿಂತ ಮುಖ್ಯವಾಗಿ ನೀವು 30 ತಿಂಗಳ ಪ್ರಪಂಚ ಅತ್ಯಂತ ಕಠಿಣ ಆರ್ಮಿ ಟ್ರೈನಿಂಗನ್ನ ಮಾಡಲು ರೆಡಿಯಾಗಿದ್ದೀರಾ.. ಲಾಡೆನ್ ನನ್ನ ಮುಗಿಸಿದ ಯು.ಎಸ್ ಆರ್ಮಿಯ ನೆವಿ ಸೀಲ್ಸ್ ಈ ಪ್ರಶ್ನೆಗಳನ್ನ ಎಂದೂ ಕೇಳಿಕೊಳ್ಳಲಿಲ್ಲ. ಹೀಗಾಗೇ ಅವ್ರು ಪ್ರಪಂಚದ ಅತ್ಯಂತ ಪರ್ಫೆಕ್ಟ್ ಮೆನ್ ಗಳು.

ಅಂದ್ಹಾಗೆ ಒಬ್ಬ ಸೀಲ್ ಆಗಲು ಅವನಿಗಿರಬೇಕಾದ ಅರ್ಹತೆಗಳು ಯಾವ್ಯಾವು ಗೊತ್ತಾ.. ನೆನಪಿರಲಿ ಇವು ಬರೀ ಅರ್ಹತೆಗಳಷ್ಟೇ.. ನಿಮ್ಮನ್ನ ಫೈನಲಿ ಸೀಲ್ ಆಘಿ ಸೆಲೆಕ್ಟ್ ಮಾಡೋಕೆ ಬೇರೆ ಬೇರೆ ಟೆಸ್ಟ್ ಗಳಿರುತ್ತವೆ.
500 ಯಾರ್ಡ್ ನ್ನ ಬರೀ 12.5 ನಿಮಿಷದಲ್ಲಿ ಈಜಬೇಕು
42 ಪುಷ್ ಅಪ್ಸ್ ಅನ್ನ 2 ನಿಮಿಷದಲ್ಲಿ ಮಾಡ್ಬೇಕು.
50 ಸಿಟ್ ಅಪ್ಸ ನ್ನ 2 ನಿಮಿಷದಲ್ಲಿ ಮುಗಿಸಬೇಕು.
6 ಪುಲ್ ಅಪ್ಸ್ ನ್ನ 2 ನಿಮಿಷದಲ್ಲಿ ಮಾಡ್ಬೇಕು.


ಹೌದು. ಸೀಲ್ಸ್ ಗಳ ಟ್ರೈನಿಂಗ್ ಕಠಿಣಗಳಲ್ಲಿ ಕಠೋರ. ಅವ್ರನ್ನ ಅಲ್ಲಿ ಮನುಶ್ಯರಂತಲ್ಲ, ಸೂಪರ್ ಮ್ಯಾನ್ ಗಳ ಥರಾನೇ ಟ್ರೀಟ್ ಮಾಡ್ತಾರೆ ಹೀಗಾಗೇ ಅಲ್ಲಿ ಅವ್ರು ಬರೀ 12.5 ನಿಮಿಷದಲ್ಲೇ 500 ಯಾರ್ಡ್ ನಷ್ಟು ದೂರ ಈಜಬೇಕು. 42 ಪುಷ್ ಅಪ್ ಗಳನ್ನ ಕೇವಲ 2 ನಿಮಿಷದಲ್ಲಿ ಮುಗಿಸ್ಬೇಕು. ಅಷ್ಟೇ ಅಲ್ಲದೆ 50 ಸಿಟ್ ಅಪ್ ಗಳನ್ನ, 6 ಪುಲ್ ಅಪ್ ಗಳನ್ನ ಎರಡೇ ಎರಡು ನಿಮಿಷಗಳನ್ನ ಮಾಡಿ ಮುಗಿಸಬೇಕು. ಸಾಮಾನ್ಯ ಮನುಷ್ಯಪಾಲಿಗೆ ಇದು ಅಸಾಧ್ಯವೇ ಸರಿ.



ಒಂದು ವೇಳೆ ಹಾಗೇನಾದ್ರು ಈ ಅರ್ಹತೆಯ ಪರೀಕ್ಷೆಯನ್ನ ನೀವು ಯಶಸ್ವಿಯಾಗಿ ಪೂರೈಸಿದ್ರೆ, ಮುಂಬರುವ ದಿನಗಳು ನಿಮಗೆ ನರಕವನ್ನೇ ತೋರಿಸುತ್ತವೆ. ಯಾಕಂದ್ರೆ ಅಲ್ಲಿ 5 ವಾರಗಳ ಕಾಲ ಮೆಂಟಲ್ ಟ್ರೈನಿಂಗ್ ಮತ್ತು 8 ವಾರಗಳ ಕಾಲ ಬೇಸಿಕ್ ಕಂಡೀಷನಿಂಗ್ ಟ್ರೈನಿಂಗ್ ಗಳಿರುತ್ತವೆ. ಅವು ಭೂಮಿಯ ಮೇಲೆ ನರಕವನ್ನೇ ತೋರಿಸುತ್ತವೆ.

ಇವೆಲ್ಲದಕ್ಕಿಂತ ಮುಖ್ಯವಾಗಿ ಒಬ್ಬ ಸೀಲ್ ಆಗಬೇಕಂದ್ರೆ, ಆತ ತನ್ನ ಕೈಕಾಲುಗಳನ್ನ ಕಟ್ಟಿ ನೀರಲ್ಲಿ ಬಿಸಾಕಿದಾಗಲೂ ಈಜಿ ಹೊರಬರುವ ಸಾಮರ್ಥ್ಯ ಅವನ್ನಿಲ್ಲಿರಬೇಕು.ಇದನ್ನ ಗ್ರೌಂಡ್ ಪ್ರೂಫಿಂಗ್ ಅಂತ ಅನ್ನಲಾಗುತ್ತೆ. ಗ್ರೌಂಡ್ ಪ್ರೂಫಿಂಗ್ ಬಲ್ಲವನೆ ಒಬ್ಬ ಯಶಸ್ವಿ ಸೀಲ್ ಅಂತ ಅನ್ನಿಸಿಕೊಳ್ಳೋಕೆ ಸಾಧ್ಯ.

ಇದಷ್ಟೇ ಅಲ್ಲದೆ ಇನ್ನೂ ಭಯಾನಕ ಟೆಸ್ಟ್ ಗಳನ್ನ ಏರ್ಪಡಸಿಲಾಗುತ್ತೆ. ಅದ್ರಲ್ಲೊಂದು ಎಲ್ ವೀಕ್. ಅಂದ್ರೆ 5 ದಿನ 5 ರಾತ್ರಿಯ ಕಠಿಣ ಅಭ್ಯಾಸ. ಈ 120 ಗಂಟೆಗಳಲ್ಲಿ ಸೀಲ್ಸ್ ಬರೀ 4 ಗಂಟೆಗಳ ಕಾಲ ಮಾತ್ರ ನಿದ್ರಿಸಬಹುದು. ಇದ್ರ ಜೊತೆ ಜೊತೆಗೆ ಸೀಲ್ ಗಳಿಗೆ ಜೀರೋ ಡಿಗ್ರಿ ಟೆಂಪರೇಚರ್ ನಲ್ಲಿ ಶತ್ರುಗಳನ್ನ ಹೇಗೆ ಕೊಲ್ಲೋದು ಅನ್ನೋದನ್ನ ಸಹ ಕಲೆಸಿಕೊಡಲಾಗಿರುತ್ತೆ.

ಪ್ಯಾರಾಟ್ರೂಪಿಂಗ್,
ಅಡ್ವಾನ್ಸಡ್ ಸ್ಕೂಬಾ ಆಪರೇಷನ್ಸ್,
ಕ್ಲೋಸ್ ಕ್ವಾಟರ್ ಕಾಂಬ್ಯಾಟ್,
ಸ್ನೈಪರ್ ಅಸಲ್ಟ್ಸ್,
ಅಂಡರ್ ವಾಟರ್ ಡೆಮೊಲಿಷನ್,
ಕಾಂಬ್ಯಾಟ್ ಸ್ವಿಮ್ಮಿಂಗ್ ಅಟ್ಯಾಕ್ಸ್,
ಡೀಪ್ ರಿಕೊನೈನ್ಸ್

ಇದ್ರ ಜೊತೆ ಜೊತೆಗೆ ಪ್ಯಾರಾಟ್ರೂಪಿಂಗ್, ಅಡ್ವಾನ್ಸಡ್ ಸ್ಕೂಬಾ ಆಪರೇಷನ್ಸ್, ಕ್ಲೋಸ್ ಕ್ವಾಟರ್ ಕಾಂಬ್ಯಾಟ್, ಸ್ನೈಪರ್ ಅಸಲ್ಟ್ಸ್, ಅಂಡರ್ ವಾಟರ್ ಡೆಮೊಲಿಷನ್, ಕಾಂಬ್ಯಾಟ್ ಸ್ವಿಮ್ಮಿಂಗ್ ಅಟ್ಯಾಕ್ಸ್, ಡೀಪ್ ರಿಕೊನೈನ್ಸ್ ಹೀಗೆ ತಹರೇವಾರಿ, ಕಠಿಣಾತಿ ಕಠಿಣ ಟ್ರೈನಿಂಗನ್ನ ನೀಡಲಾಗುತ್ತೆ.

ಈಗ ನಿಮಗೆ ಗೊತ್ತಾಗಿರಬೇಕು ಯಾಕೆ ಲಾಡೆನ್ ಗೆ ಇವ್ರ ಮುಂದೆ ಬದುಕುವ ಚಾನ್ಸೇ ಇರ್ಲಿಲ್ಲ ಎಂದು. ಯಾಕಂದ್ರೆ ಇವ್ರು ಸೂಪರ್ ಹ್ಯೂಮನ್ಸ್, ಡೆಡ್ಲಿಕಿಲ್ಲರ್ಸ್.
!-- Facebook share button Start -->